Early childhood development & education | ಆರಂಭಿಕ ಬಾಲ್ಯ ಬೆಳವಣಿಗೆ ಮತ್ತು ಶಿಕ್ಷಣ

This Kannada article appeared in ಅನುಭವ, a monthly magazine in its April 2023 edition. The magazine is produced by Deenabandhu Trust as a resource for teachers across the state. Article was invited to focus on the importance of early childhood development on education. Some of the reflections in the article are both from clinical practice in Chamarajanagar ditrict as well as studying how early childhood development inequalities affect education, opportunities and the overall gains and achievements of the child. It humbles those of us who situate a lot of educational and other attainments to hardwork & merit alone. It was written as an outreach to teacher communities to recognise the early childhood origins of several day-to-day features they may see in a primary school classroom. Many thanks to Prof. G S Jayadev for his invitation to write this.

ಸಿದ್ದಮ್ಮ ಗಾತ್ರದಲ್ಲಿ ಚಿಕ್ಕಮೂರ್ತಿ. ಅವಳು ಓದುತ್ತಿದ್ದ ಸರ್ಕಾರಿ ಶಾಲೆಯ ನಾಲ್ಕನೇ ತರಗತಿಯಲ್ಲಿಇದ್ದದ್ದು 30 ಮಕ್ಕಳು. ಅವಳ ಬಗ್ಗೆ ಶಿಕ್ಷಕರನ್ನುಕೇಳಿದರೆ, ಅವರ ಮಾತಿನಲ್ಲಿ ಮೊದಲು ಕೇಳಿ ಬರುವವಿಷಯವೇನೆಂದರೆ ಬಾಲಕಿಯದು ಅ೦ತರ್ಮುಖಿ ಸ್ಪಭಾವ; “ಅವಳು ಮಾತಾಡೊದೇಇಲ್ಲ;ಬಹಳ ನಾಚಿಕೆ”. ಇದು ಶಿಕ್ಬಕರ ಅನಿಸಿಕೆ. ಶಾಲಾ ಕಾರ್ಯಕ್ರಮಗಳಲ್ಲಿ, ಪರೀಕ್ಷೆಗಳಲ್ಲಿ, ಅಂಕಗಳಿಕೆಯಲ್ಲಿ ಯಾವಾಗಲೂ ಎಲ್ಲರಿಗಿ೦ತಲೂ ಹಿಂದೆ. ಗಣಿತ, ಕನ್ನಡ ಭಾಷಾ ಕೌಶಲ್ಯ, ಇವೆಲ್ಲದರಲ್ಲೂ ತನ್ನ ಸಹಪಾಠಿಗಳಿಗಿಂತ ಹಿ೦ದೆ. ಇಂಗ್ಲಿಷ್‌ಅ೦ತೂಇಲ್ಲವೇಇಲ್ಲ; ಮನೆಯಲ್ಲೋ ಇವೆಲ್ಲವನ್ನು ಗಮನಿಸಲುಯಾರಿಲ್ಲ. ಅಪ್ಪ ದಿನಗೂಲಿಗೆ ಹೋದರೆ, ಇತ್ತೀಜಿಗೆ ಸಿಗುವ ಪ್ಯಾಕೆಟ್‌-ವಿಸ್ಕಿಯ ಮತ್ತಿನಲ್ಲೇ ರಾತ್ರಿ ಊಟದ ಸಮಯಕ್ಕೆಹಾಜರ್‌. ಹತ್ತಿರವೇ ಇರುವಮನೆಗಳಲ್ಲಿ ಮನೆಗೆಲಸ ಮಾಡುತ್ತಿರೋ ತಾಯಿಯ ಸಂಪಾದನೆಇವಳು ಮತ್ತು ಇವಳ ಅಣ್ಣನ ಊಟ, ಬಟ್ಟೆ, ಪುಸ್ತಕ ಪೂರೈಸುವುದರಲ್ಲೇ ಖಾಲಿ. ಸಿದ್ದಮ್ಮನನ್ನು ಮಾತಾಡಿಸಿದರೆ ಅವಳಿಗೆ ಯಾವುದೇ ಆಕಾಂಕ್ಷೆಗಳೂ ಇಲ್ಲ, ಸ್ಪರ್ಧೆಮಾಡುವಉತ್ಸಾಹವಂತೂ ಇಲ್ಲವೇ ಇಲ್ಲ. ಹೀಗೆ ಏನನ್ನಾದರೂಸಾಧಿಸುವ ಮನಸ್ಸೆ ಇಲ್ಲದ೦ತಮಕ್ಕಳ ಬಗ್ಗೆ ಏನು ಮಾಡಬೇಕು. ಇದು ಕೇವಲ ಮೊಂಡುತನವೇ? ಅವಳ ವರ್ತನೆಯೇಭಾವಿಸಬೇಕೆ? ಅಥವಾ ಇದುಸೋಮಾರಿತನವೆ? ಅಥವಾ ಹೆತ್ತವರು ಕೊಡುತ್ತಿಲ್ಲವೆ? 

Click here to download the issue

ಸಿದ್ದಮ್ಮನ ಈ ಕಾಲ್ಪನಿಕ ಕಥೆ ಯಾವುದೇ ಹಿಂದುಳಿದ ಅಥವಾ ಗ್ರಾಮೀಣ ಪ್ರದೇಶದ ಶಾಲೆಯ ಮಕ್ಕಳ ಕಥೆಯಾಗಿರಬಹುದು. ಯಾವುದೇತರಗತಿಯನ್ನು ಗಣನೆಗೆ ತೆಗೆದುಕೊ೦ಡರೂ ಎಲ್ಲಾ ತರಗತಿಗಳಲ್ಲೂ ಕೆಲವು ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿರುವುದು ಸಹಜ. ಸರಿಯಾದ ಪ್ರಾಥಮಿಕಶಿಕ್ಷಣವು ಜೀವನೋಪಾಯಕ್ಕೆ ದಾರಿಮಾಡಿ ಕೊಡುತ್ತದೆ; ಸಾಮಾಜಿಕ ಸ್ಥಾನಮಾನ ಮತ್ತು ಆಧುನಿಕ ಸೌಲಭ್ಯಗಳನ್ನನುಭವಿಸಲು, ಆನ೦ದಿಸಲುಬುನಾದಿಯಾಗಿದೆ. ನಮ್ಮ ಮಕ್ಕಳ ಗುಣಮಟ್ಟದ ಪ್ರಾಥಮಿಕ ಶಿಕ್ಷಣದಿಂದಲೇ ವಂಚಿತರಾದರೆ ರಾಷ್ಟ್ರಮಟ್ಟದಲ್ಲಿ ನಾವು ಸಾಧಿಸಬಯಸುವ ಎಲ್ಲಾಆಶಯಗಳನ್ನು ಹೇಗೆ ಸಾಧಿಸಬಹುದು) ಪ್ರತಿಯೊಂದು ಮಗುವೂ ನಿರ್ದಿಷ್ಟ ಗುಣಗಳನ್ನು ಹೊಂದಿರುತ್ತದೆ; ಇದು ಎಲ್ಲರಿಗೂ ತಿಳಿದಿರುವ ವಿಷಯವೆ. ಹಾಗಾದರೆ ಮಕ್ಕಳು ಶಾಲಾಕಲಿಕೆಯಲ್ಲಿ ಹಿ೦ದುಳಿಯುವುದಕ್ಕೆ ಕಾರಣ ಅವರ ಸೋಮಾರಿತನ ಎಂದುಹೇಳಿ ಸುಮ್ಮನಾಗಿಬಿಡಬೇಕೆ? ಅಥವಾ ಓದಿನ ಬಗ್ಗೆಕಾಳಜಿವಹಿಸುತ್ತಿಲ್ಲ ಎಂದು ನಿರ್ಧರಿಸಿ ನಿಷ್ಠುರವಾಗಿರಬೇಕೆ? ಈ ಕುರಿತಾಗಿ ಬೆಳಕುಚೆಲ್ಲುವುದೇ ಈ ಲೇಖನದ ಗುರಿ.

ಭಾರತ ಸರ್ಕಾರವು ಇತ್ತೀಚಿಗೆ ಬಿಡುಗಡೆ ಮಾಡಿದ ನ್ಯಾಶನಲ್‌ ಅಚೀವ್‌ಮೆಂಟ್‌ ಸರ್ವೆ (NAS) 2021 ಇದರ ವರದಿ ಶಿಕ್ಷಣ ಕ್ಷೇತ್ರದಲ್ಲಿಕೆಲಸಮಾಡುತ್ತಿರುವ ಎಲ್ಲರಿಗೂ ಕಾಳಜಿಯ ವಿಷಯವಾಗಿದೆ. ಕಳೆದ ವರ್ಷದ ಡೆಕನ್‌ ಹೆರಾಲ್ಡ್‌ ಪತ್ರಿಕೆಯಲ್ಲಿ NAS ವರದಿಯನ್ನು ಚರ್ಚಿಸುತ್ತಬೆ೦ಗಳೂರಿನ ಪಭ್ಲಿಕ್‌ ಅಫೇರ್ಸ್‌ ಸೆ೦ಟರ್‌ ನಿರ್ದೇಶಕರಾದ ಗುರುಚರಣ್‌ ಗೊಳ್ಳೇರ್‌ರ್ಕೇರಿ ಅವರು ಹೇಳುತ್ತಾರೆ “ಜ್ಞಾನವು ಶಿಕ್ಷಣದ ಹೃದಯ ಎಂದುಭಾವಿಸುವುದಾದರೆ ಮತ್ತು ಶಿಕ್ಷಣವನ್ನು ಭವಿಷ್ಯದ ಪೀಳಿಗೆಗೆ ಇಂದು ನಾವು ಹಾಕುವ ಬುನಾದಿ ಎ೦ದು ಪರಿಗಣಿಸುವುದಾದರೆ, ನಾವು ಈ ಎರಡರಲ್ಲೂಆಗುತ್ತಿರುವ ತೀವ್ರ ಕುಸಿತವನ್ನು ವಿಶ್ಲೇಷಿಸಬೇಕು” ಎ೦ದಿದ್ದಾರೆ. NAS 2021 ಸಮಗ್ರ ಸಮೀಕ್ಷೆಯು ಗ್ರಾಮೀಣ ಮತ್ತು ನಗರಗಳೆರಡರಿ೦ದಲೂ 720 ಜಿಲ್ಲೆಗಳ 1.18 ಲಕ್ಷ ಶಾಲೆಗಳ ಸುಮಾರು 34 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಂಡಿತ್ತು ಮಕ್ಕಳ ಜ್ಞಾನಾರ್ಜನಾ ಸಾಮರ್ಥ್ಯ ಮತ್ತು ಶೈಕ್ಷಣಿಕ ಸಾಧನೆಗಳಲ್ಲಿನತಾರತಮ್ಯಕ್ಕೆ ವ್ಯಕ್ತಿಗತವಾದ ಸಾಮರ್ಥ್ಯಗಳು ಮಾತ್ರ ಕಾರಣವಲ್ಲ. ಇದಕ್ಕೆ ಇರುವ ನಿಜವಾದ ಕಾರಣವನ್ನು ನಾವು ಮಕ್ಕಳ ಜೀವನದ ಮೊದಲು 1000 ದಿನಗಳಲ್ಲಿ ಅವರಿಗೆ ದೊರೆತಿರುವ ಸಮಗ್ರ ಆರೈಕೆಯಲ್ಲಿದೆ. ಎಂಬುದನ್ನು ಗುರುತಿಸಬೇಕು.

ಮಕ್ಕಳ ಶೈಕ್ಷಣಿಕ ಪ್ರಗತಿಯು ಕೇವಲ ವ್ಯಕ್ತಿಗತವಾಗಿ ಬಂದ ಉತ್ಸಾಹ ಅಥವಾ ಬೆಂಬಲವನ್ನು ಮಾತ್ರ ಅವಲಂಬಿಸಿಲ್ಲ. ಬೆಳವಣಿಗೆಯ ಮೊದಲ 1000 ದಿನಗಳಲ್ಲಿ ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆಗೆ ಪೂರಕ ವಾತಾವರಣ ದೊರೆಯುವುದೂ ಸಹ ನಿರ್ಣಾಯಕವಾಗುತ್ತದೆ. ಅದರಲ್ಲೂ ಮುಖ್ಯವಾಗಿಯಾವ ರೀತಿಯ ಪೌಷ್ಠಿಕಾ೦ಶ ಮತ್ತು ಆರೈಕೆ ಸಿಕ್ಕಿದೆ ಎಂಬುದೂ ಮುಖ್ಯವಾಗುತ್ತದೆ. ತುಳಿತಕ್ಕೊಳಗಾದ ತಳಸಮುದಾಯದ ಹಿನ್ನೆಲೆಯಿಂದ ಬಂದಿರುವಮಕ್ಕಳು, ಅರಣ್ಯಾವಾಸಿ ಆದಿವಾಸಿ ಸಮುದಾಯದಿಂದ ಬ೦ದ ಮಕ್ಕಳು ತೀವ್ರವಾದ ಸಾಮಾಜಿಕ-ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಾರೆ. ಹುಟ್ಟೂರಿನಿ೦ದ ದೂರವಿರುವ ಬಡ ವಲಸಿಗ ಕುಟುಂಬಗಳಲ್ಲಿ ಜನಿಸಿದ ಮಕ್ಕಳು, ಈಗಾಗಲೇ ಇರುವ ಆರ್ಥಿಕ ಸಾಮಾಜಿಕ ಕಷ್ಟಗಳ ಜೊತೆಗೆ ಪೋಷಕರನಿರ್ಲಕ್ಷ್ಯವನ್ನೂ ಅನುಭವಿಸಬೇಕಾಗುತ್ತದೆ. ಈ ಎಲ್ಲ ತಳಸಮುದಾಯದ ಮಕ್ಕಳಿಗೆ ಅವರ ಬೆಳವಣಿಗೆಯ ಮೊದಲ 1000 ದಿನಗಳಲ್ಲಿ ಸಿಗಬೇಕಾದಕನಿಷ್ಠ ಮಾನಸಿಕ ನೆಮ್ಮದಿಯಾಗಲಿ, ಪೌಷ್ಠಿಕಾ೦ಶಗಳುಳ್ಳ ಆಹಾರ-ಪಾನೀಯಗಳಾಗಲಿ ದೊರೆಯುವುದಿಲ್ಲ. ಆರೋಗ್ಯಕರ ಮೆದುಳಿನ ಬೆಳವಣಿಗೆಗೆಪೂರಕವಾದ ಯಾವುದೂ ದೊರೆಯದ ಈ ಮಕ್ಕಳು ಮುಂದೆ ಶಾಲೆಗಳಲ್ಲಿ ಹಿಂದೆ ಬೀಳುತ್ತಾರೆ.

ನಾವು ಸಾಮಾನ್ಯವಾಗಿ ಪ್ರಾಥಮಿಕ ಶಾಲೆಯನ್ನು ಭವಿಷ್ಯದ ಸಾಧನೆ ಮತ್ತು ಪ್ರಗತಿಗೆ ಬುನಾದಿಯೆ೦ದು ಪರಿಗಣಿಸುತ್ತೇವೆ. ಮಗುವಿನ ಜೀವನದ ಮೊದಲ1000 ದಿನಗಳು ಅವರ ಭವಿಷ್ಯದ ಬೆಳವಣಿಗೆಯನ್ನು ರೂಪಿಸುವಲ್ಲಿ ವಿಶೇಷವಾಗಿ ಪ್ರಮುಖವಾಗಿವೆ ಎ೦ದು ಸಂಶೋಧನೆ ತೋರಿಸಿದೆ. ಈಅವಧಿಯಲ್ಲಿ, ಮಕ್ಕಳು ತ್ವರಿತ ಮೆದುಳಿನ ಬೆಳವಣಿಗೆಯನ್ನು ಅನುಭವಿಸುತ್ತಾರೆ. ಅವರ ಅರಿವಿನ ಗುಣಮಟ್ಟ ಮತ್ತು ಭಾವನಾತ್ಮಕ ಬೆಳವಣಿಗೆಯಪ್ರಮಾಣ ಮತ್ತು ಗುಣಮಟ್ಟವನ್ನು ನಿರ್ಧರಿಸುವಲ್ಲಿ ಅವರ ಪರಿಸರವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆರಂಭಿಕ ವರ್ಷಗಳ (ವಿಶೇಷವಾಗಿಮೊದಲ ಮೂರು ವರ್ಷಗಳು) ಆರೋಗ್ಯಕರ ಬೆಳವಣಿಗೆಯು ಶೈಕ್ಷಣಿಕ ಸಾಧನೆ, ಆರ್ಥಿಕ ಉತ್ಪಾದಕತೆ, ಜವಾಬ್ದಾರಿಯುತ ಪೌರತ್ವ ಇತ್ಯಾದಿಗಳಿಗೆ ಭದ್ರಬುನಾದಿಯನ್ನು (Building Block) ಒದಗಿಸುತ್ತದೆ. ಮುಂಬರುವ ಪೀಳಿಗೆಯ ಒಟ್ಟಾರೆ ಯಶಸ್ಸು ಈ ಅಂಶಗಳನ್ನು ಆಧರಿಸಿದೆ.

ತಮ್ಮ ಆರಂಭಿಕ ವರ್ಷಗಳಲ್ಲಿ ಸರಿಯಾದ ಪೋಷಣೆ, ಆರೈಕೆ ಮತ್ತು ಸೂಕ್ತ ಸಂವೇದನೆಗಳನ್ನು ಪಡೆಯುವ ಮಕ್ಕಳು ಉತ್ತಮ ಅರಿವಿನ ಮಟ್ಟವನ್ನುಸಾಧಿಸುತ್ತಾರೆ; ಅವರ ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಸಾಧ್ಯವಿದೆ ಎಂದು ಅಧ್ಯಯನಗಳು ತೋರಿಸಿವೆ. ಇದಲ್ಲದೆ, ಪೋಷಕರಬೆಂಬಲ ಮತ್ತು ಮಕ್ಕಳನ್ನು ಗ೦ಭೀರವಾಗಿ ಪರಿಗಣಿಸಿ ಒಳಗೊಳ್ಳುವ ಮನೆಯ ವಾತಾವರಣ ಗುಣಮಟ್ಟದ ಭಾವನಾತ್ಮಕ ಬೆಳವಣಿಗೆಯಲ್ಲಿ ಮಹತ್ವದಪಾತ್ರವನ್ನು ವಹಿಸುತ್ತದೆ. ಸಾಕಷ್ಟು ಕಾಳಜಿ ಮತ್ತು ಹಿರಿಯರ ಗಮನವನ್ನು ಪಡೆಯುವ ಮನೆಗಳಲ್ಲಿ ಬೆಳೆಯುವ ಮಕ್ಕಳು ಶಾಲೆಯಲ್ಲಿ ಮತ್ತು ಜೀವನದಇತರ ರಂಗಗಳಲ್ಲಿ ಸಫಲರಾಗುತ್ತಾರೆ. ಮೊದಲನೆ 3 ವರ್ಷಗಳಲ್ಲಿ ಮಕ್ಕಳ ಪರಿಸರದೊಂದಿಗೆ ಸಂವಹನ ನಡೆಸುವಾಗ ಅವರ ಮೆದುಳು ಕ್ಷಣದಿಂದ ಕ್ಷಣಕ್ಕೆಹೊಸ ನಿರ್ಮಾಣಗಳನ್ನು ಒಳಗೊಳ್ಳುತ್ತದೆ. ಈ ಸ೦ದರ್ಭದಲ್ಲಿ ಪ್ರತಿ ಸೆಕೆಂಡಿಗೆ ಒಂದು ದಶಲಕ್ಷಕ್ಕೂ ಹೆಚ್ಚು ನರ ಸಂಪರ್ಕಗಳು ಅವರ ಮೆದುಳಿನಲ್ಲಿರೂಪುಗೊಳ್ಳುತ್ತವೆ; ಜೀವನದ ಬೇರೆ ಯಾವುದೇ ಹಂತದಲ್ಲಿ ಈ ರೀತಿಯ ನರ ಸಂಪರ್ಕಗಳ ಬೆಳವಣಿಗೆ ಮತ್ತೆ ಕಾಣಿಸುವುದಿಲ್ಲ. ಮಗುವಿನ ಆರಂಭಿಕವಯಸ್ಸಿನ ಅನುಭವಗಳು ಅವರ ಮೆದುಳಿನ ಬೆಳವಣಿಗೆಯೊಂದಿಗೆ ನಿರ್ಣಾಯಕ ಪ್ರಭಾವ ಉಂಟುಮಾಡುತ್ತದೆ. ಇದು ಜೀವನದುದ್ದಕ್ಕೂ ಕಲಿಕೆ,ಆರೋಗ್ಯ ಮತ್ತು ನಡವಳಿಕೆಗೆ ಬಲವಾದ ಅಡಿಪಾಯವನ್ನು ಒದಗಿಸುತ್ತದೆ. ವಿರುದ್ದ ಸಂವೇದನೆಗಳೇ ತುಂಬಿರುವ ವಾತಾವರಣದಲ್ಲಿ ಇದೇ ಪ್ರಕ್ರಿಯೆಯುಮಕ್ಕಳಿಗೆ ದುರ್ಬಲವಾದ ಭವಿಷ್ಯವನ್ನು ರಚಿಸಬಹುದು. ಮಕ್ಕಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಅವರಿಗೆ ಆರೋಗ್ಯ, ರಕ್ಷಣೆ ಮತ್ತುಪೋಷಣೆಗಳು ದೊರೆಯಬೇಕು. ಮಾನವ ಹಕ್ಕುಗಳಿಗೆ ಹೆಚ್ಚುಗಮನ ಕೊಡುವ ನಾವು ಮಕ್ಕಳಿಗೆ ಹಾನಿಯಿಂದ ರಕ್ಷಣೆ ಸಿಗುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಸುರಕ್ತತೆಯ ಪ್ರಜ್ಞೆ ಹುಟ್ಟುವಂತೆ ನಂಬಿಕೆಯ ವಾತಾವರಣ ಸೃಷ್ಟಿಸಬೇಕು. ಇದಕ್ಕೆ ಪೂರಕವಾಗಿ ಆರಂಭಿಕ ಕಲಿಕೆಗೆ ಅವಕಾಶಗಳುಸರಿಯಾಗಿರಬೇಕು; ಮಕ್ಕಳು ನಿರ್ಭೀತಿಯಿಂದ ಪೋಷಕರು ಮತ್ತು ಪಾಲಕರ ಜೊತೆ ಬೆರೆತು ಮಾತನಾಡುವುದು, ಹಾಡುವುದು ಮತ್ತು ಆಡುವಂತಹವಾತಾವರಣವಿರಬೇಕು. ಮಕ್ಕಳ ಭಾವನೆಗೆ ಸ್ಪಂದಿಸುವ, ಆರೈಕೆ ಮಾಡುವ ಪ್ರೀತಿಯಿಂದ ಸಲಹುವ ಪೋಷಕರ ವರ್ತನೆ ನಿರ್ಣಾಯಕವಾಗುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಮೆದುಳನ್ನು ಪೋಷಿಸಲು ಮತ್ತು ಬೆಳೆಯುತ್ತಿರುವ ದೇಹಗಳನ್ನು ಉತ್ತೇಜಿಸಲು ಇವೆಲ್ಲವೂ ಅಗತ್ಯವಿದೆ. 

ಬಡತನದಲ್ಲಿ ವಾಸಿಸುವ ಅಥವಾ ಸಂಘರ್ಷ ಮತ್ತು ಬಿಕ್ಕಟ್ಟನಿ೦ದ ಬಾಧಿತರಾಗಿರುವ ಮಕ್ಕಳು, ವಲಸೆ ಹೋಗುವ ಮಕ್ಕಳು, ತಾರತಮ್ಯವನ್ನುಎದುರಿಸುತ್ತಿರುವ ಸಮುದಾಯಗಳಿಗೆ ಸೇರಿದ ಮಕ್ಕಳು ಮತ್ತು ವಿಕಲಾಂಗ ಮಕ್ಕಳೂ ಸೇರಿದಂತೆ – ಪ್ರಪಂಚದ ಲಕ್ಷಾಂತರ ಹಿ೦ದುಳಿದ ಮಕ್ಕಳಿಗೆ ನಾವುಈ ಅವಕಾಶದ ಕಿಟಕಿಯನ್ನು ತೆರೆಯುವುದಿಲ್ಲ. ಲಕ್ಷಾಂತರ ಮಕ್ಕಳು ಹಿ೦ಸಾಚಾರ, ಕಲುಷಿತ ಪರಿಸರ ಮತ್ತು ತೀವ್ರ ಒತ್ತಡಕ್ಕೆ ಒಡ್ಡಿಕೊಳ್ಳುತ್ತಾಬೆಳೆಯುತ್ತಾರೆ. ಅವರಿಗೆ ಅಗತ್ಯವಿರುವ ಪೌಷ್ಟಿಕಾಂಶ ಅಥವಾ ಆರೋಗ್ಯ ರಕ್ಷಣೆ ಸಿಗುವುದಿಲ್ಲ. ಹೀಗಾಗಿ ಅವರು ಕಲಿಯುವ ಅವಕಾಶಗಳನ್ನುಕಳೆದುಕೊಳ್ಳುತ್ತಾರೆ, ಬೆಳೆಯುತ್ತಿರುವ ಅವರ ಮೆದುಳು ಅಭಿವೃದ್ಧಿ ಹೊಂದಲು ಅಗತ್ಯವಿರುವ ಪ್ರಚೋದನೆಗಳು ಸಿಗದೆ ಸರಿಯಾಗಿ ಬೆಳೆಯುವುದಿಲ್ಲ. ಅವರ ಪೋಷಕರು ಮತ್ತು ಆರೈಕೆದಾರರು ಈ ಸಂದರ್ಭಗಳಲ್ಲಿ ತಮ್ಮ ಮಕ್ಕಳಿಗೆ ಪೋಷಣೆಯ ಆರೈಕೆಯನ್ನು ಒದಗಿಸಲು ಅಗತ್ಯವಾದ ಸಮಯ, ಸಂಪನ್ಮೂಲಗಳು ಮತ್ತು ಸೇವೆಗಳನ್ನು ಪಡೆಯಲು ಹೆಣಗಾಡುತ್ತಾರೆ.

ವಿಶ್ವ ಸಂಸ್ಥೆಯ ಮಕ್ಕಳ ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳ ಕುರಿತು ಕೆಲಸಮಾಡುತ್ತಿರುವ UNICEF ಪ್ರಕಾರ, ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವಆರಂಭಿಕ ಬಾಲ್ಯದ ಬೆಳವಣಿಗೆ ಅವಕಾಶವನ್ನು ಮಕ್ಕಳು ಕಳೆದುಕೊಂಡರೆ ಈ ಮಕ್ಕಳು ತಮ್ಮ ಜೀವನದಲ್ಲಿ ಗಳಿಸಬಹುದಾಗಿದ್ದ ಪೂರ್ಣ ಸಾಮರ್ಥ್ಯವನ್ನುಪಡೆಯುವ ಮೊದಲೇ ಮರಣಹೊಂದುತ್ತಾರೆ. ಬದುಕು ಸಾಗಿಸುವಾಗ ದೈಹಿಕ ಮತ್ತು ಮಾನಸಿಕ ಅನಾರೋಗ್ಯದೊಂದಿಗೆ ಜೀವನವನ್ನು ನಡೆಸುತ್ತಾರೆ; ಜೀವನ ಕೌಶಲಗಳನ್ನು ಕಲಿಯಲು ಮತ್ತು ನಂತರದ ಜೀವನೋಪಾಯಕ್ಕಾಗಿ ಹೆಣಗುತ್ತಾರೆ. ನಮ್ಮ ದೇಶದ ಸಮಗ್ರ ಬೆಳವಣಿಗೆಯ ಮೇಲೆ ಇದುಪರಿಣಾಮ ಬೀರುತ್ತದೆ. ಸಾಮಾಜಿಕ ನ್ಯಾಯವನ್ನು ಬಯಸುವ ನಮ್ಮ ಪ್ರಜಾಪ್ರಭುತ್ವದ ಮೇಲೆ ದುಷ್ಪರಿಣಾಮವನ್ನು೦ಟುಮಾಡುತ್ತದೆ. UNICEF ಮತ್ತುWHO ಪ್ರಕಾರ ಮಕ್ಕಳಿಗೆ ಜೀವನದಲ್ಲಿ ಉತ್ತಮ ಆರ೦ಭವನ್ನು ನೀಡಲು ನಮ್ಮ ದೇಶ ಮತ್ತು ಸಮಾಜ ವಿಫಲವಾದರೆ, ಭವಿಷ್ಯದಲ್ಲಿ ನಮ್ಮ ಸಮಾಜಬಡತನದಿಂದ ನರಳುತ್ತದೆ, ಅಸಮಾನತೆಗಳು ಹೆಚ್ಚುತ್ತವೆ ಹಾಗೂ ನಮ್ಮ ಸಮಾಜದ ಸ್ಥಿರತೆಗೆ ಧಕ್ಕೆಯನ್ನುಂಟಾಗಬಹುದಾದ ಸಾಧ್ಯತೆಗಳಿವೆ.

ಪ್ರತಿ ಮಗುವಿಗೆ ಶಿಕ್ಷಣದ ಹಕ್ಕಿದೆ ಎಂದು ಪ್ರಪಂಚದ ಎಲ್ಲಾ ರಾಷ್ಟ್ರಗಳು ದೃಢೀಕರಿಸಿರುವುದು ಆಧುನಿಕ ಯುಗದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಆರ್ಟಿಕಲ್‌ 26 ರ ಪ್ರಕಾರ ಶಿಕ್ಷಣದ ಸಾರ್ವತ್ರಿಕ ಪ್ರವೇಶವನ್ನು ವಾಸ್ತವವಾಗಿ ಮಾನವ ಹಕ್ಕು ಎಂದುಪ್ರತಿಪಾದಿಸಲಾಗಿದೆ, ಇದಕ್ಕೆ ಭಾರತವೂ ಸಹಿ ಮಾಡಿದೆ. ನಮ್ಮ ವಿದ್ಯಾರ್ಥಿಗಳ ವೈವಿಧ್ಯಮಯ ಕೌಟುಂಬಿಕ ಸಂದರ್ಭಗಳು ಮತ್ತು ಸಾಮಾಜಿಕಅಸಮಾನತೆಗಳು ತರಗತಿಯ ಕಾರ್ಯಕ್ಷಮತೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಎಲ್ಲಾವಿದ್ಯಾರ್ಥಿಗಳನ್ನು ಅವರ ಹಿನ್ನೆಲೆಯನ್ನು ಲೆಕ್ಕಿಸದೆ ಬೆಂಬಲಿಸುವ ಕಲಿಕೆಯ ವಾತಾವರಣವನ್ನು ರಚಿಸಲು ನಾವು ಶ್ರಮಿಸಬೇಕು. ಇದರರ್ಥ ವಿಭಿನ್ನ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳ ನಿರ್ದಿಷ್ಟ ಅಗತ್ಯಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು ಮತ್ತುಪರಿಹರಿಸುವುದು.

ನಮ್ಮ ವಿದ್ಯಾರ್ಥಿಗಳ ವೈವಿಧ್ಯಮಯ ಅನುಭವಗಳು ಮತ್ತು ಹಿನ್ನೆಲೆಗಳನ್ನು ಗಣನೆಗೆ ತೆಗೆದುಕೊಳ್ಳುವ, ಸಾಂಸ್ಕೃತಿಕವಾಗಿ ಸ್ಪ೦ದಿಸುವ ಬೋಧನಾತಂತ್ರಗಳನ್ನು ರೂಪಿಸುವುದು ಒಂದು ವಿಧಾನವಾಗಿದೆ. ಬೇರೆಬೇರೆ ಎದ್ಯಾರ್ಥಿಗಳ ಅನನ್ಯ ಅಗತ್ಯತೆಗಳು ಮತ್ತು ಕಲಿಕೆಯ ಶೈಲಿಗಳನ್ನು ಬೆ೦ಬಲಿಸಲುನಾವು ವಿಶಿಷ್ಠ ಕ್ರಮಗಳನ್ನು ಸಹ ಅಲ್ಲದೆ ಎದ್ಯಾರ್ಥಿಗಳು ಮುತ್ತು ಅವರ ಕುಟುಂಬಗಳೊಂದಿಗೆ ಬಲವಾದ ಸಂಬಂಧಗಳನ್ನು ಬೆಳೆಸಿಕೊಂಡು ಮಕ್ಕಳವಾಸ್ತವ ಪರಿಸ್ಥಿತಿಗಳ ಒಳನೋಟವನ್ನು ಪಡೆದು ಶೈಕ್ಷಣಿಕ ಯಶಸ್ಸನ್ನು ಸಾಧಿಸುವಲ್ಲಿ ಮಕ್ಕಳಿಗೆ ನೆರವಾಗಬಹುದು.

ಮಕ್ಕಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಬೇಕಾದರೆ UNICEF ಸಂಸ್ಥೆಯ ಪ್ರಕಾರ ಅವರಿಗೆ ”Nurturing care” (ಪೋಷಣೆ-ಆರೈಕೆ) ಅಗತ್ಯವಿದೆ. ಕೇವಲ ಆಹಾರ ಮತ್ತು ವಸತಿಯ ಅವಶ್ಯಕತೆಗಳನ್ನು ಪೂರೈಸಿದರೆ ಸಾಲುವುದಿಲ್ಲ. ಮಕ್ಕಳ ಬೆಳವಣಿಗೆಯ ಮೇಲೆ ಕಾಳಜಿ ವಹಿಸುವುದು,ಅವರಿಗೆ ಸುರಕ್ತಿತ ಭಾವನೆ ಮೂಡಿಸುವುದು ಮತ್ತು ಅವರು ಅಭಿವೃದ್ಧಿ ಹೊ೦ದಲು ಪ್ರೀತಿಯ ವಾತಾವರಣವನ್ನು ಸೃಷ್ಟಿಸುವುದು ಬಹಳ ಮುಖ್ಯ.ಪೋಷಕರು ತಮ್ಮದೇ ಆದ ಸಾಮಾಜಿಕ, ಆರ್ಥಿಕ ಒತ್ತಡಗಳನ್ನು ನಿಭಾಯಿಸುತ್ತಿರುವಾಗ ಮಕ್ಕಳ ಕಡೆ ಗಮನವೀಯಲಾಗುವುದಿಲ್ಲ. ಅಥವಾ ಮನೆಗಳಲ್ಲಿಒಬ್ಬರು ಅಥವಾ ಇಬ್ಬರೂ ಪೋಷಕರು ದೀರ್ಫಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಕಾರಣಾ೦ತರಗಳಿಂದ ಮಗುವಿಗೆ ಅಲಭ್ಯವಾಗಿದ್ದರೆಮಕ್ಕಳ ಬೆಳವಣಿಗೆಯಲ್ಲಿ ತುಂಬಲಾರದ ಕೊರತೆಯುಂಟಾಗುತ್ತದೆ. ಈ ಹಿಂದೆಯೇ ಹೇಳಿದಂತೆ ಗರ್ಭಾವಸ್ಥೆಯಿಂದ ಮೂರು ವರ್ಷದವರೆಗಿನ ಸಮಯಮಕ್ಕಳ ಮೆದುಳಿನ ಬೆಳವಣಿಗೆಗೆ ನಿರ್ಣಾಯಕವಾಗಿದೆ. Nurturing care (ಪೋಷಣೆ-ಆರೈಕೆ) ಅ೦ದರೆ ದೈಹಿಕ ಪೋಷಣೆ ಮಾತ್ರವಲ್ಲ, ಸೂಕ್ತವಾದಭಾವನಾತ್ಮಕ, ಸಾಮಾಜಿಕ ಬೆಳವಣಿಗೆಗಳು ಮಕ್ಕಳು ಅನಿವಾರ್ಯವಾಗಿ ಎದುರಿಸುವ ವ್ಯತಿರಿಕ್ತ ಸನ್ನಿವೇಶಗಳಲ್ಲಿ ತಮ್ಮನ್ನೇ ತಾವು ರಕ್ಷಿಸಿಕೊಳ್ಳಲುಸಹಾಯಮಾಡುತ್ತವೆ. Nurturing care (ಪೋಷಣೆ-ಆರೈಕೆ) ದೊರೆತಿರುವ ಮಕ್ಕಳು ತಾವಷ್ಟೇ ಉತ್ತಮ ಬೆಳವಣಿಗೆಯನ್ನು ಅನುಭವಿಸುವುದಲ್ಲದೆಮುಂದೆ ತಮ್ಮ ಮಕ್ಕಳಿಗೂ ಇದೆ ರೀತಿಯ ಆರೈಕೆ ಕೊಡುವ ಸಾಧ್ಯತೆಗಳು ಹೆಚ್ಚಿರುತ್ತದೆ (Inter-generational impact of nurturing care). ಒಳ್ಳೆಯ ಪೋಷಣೆ-ಆರೈಕೆ ಇರುವ ಸಮಾಜದಲ್ಲಿ ಆರೋಗ್ಯ ಮತ್ತು ಸಾಮಾಜಿಕ ಒಗ್ಗಟ್ಟನ್ನು ಕಾಣಬಹುದು. ಪೋಷಕರು, ಕುಟುಂಬಗಳು ಮತ್ತು ಇತರಆರೈಕೆದಾರರು ಪೋಷಣೆ-ಆರೈಕೆಯ ಮುಖ್ಯ ಪೂರೈಕೆದಾರರು. ಆದ್ದರಿ೦ದ, ಮಕ್ಕಳು ಶಾಲೆಗಳಲ್ಲಿ ಯಶಸ್ವಿಯಾಗಬೇಕಾದರೆ, ಅವರು ಶಾಲೆಗಳಿಗೆಕಾಲಿಡುವ ಮೊದಲು ಅವರ ಮನೆಗಳು ಮತ್ತು ಸಾಮಾಜಿಕ ಪರಿಸರವೂ ಸುರಕ್ತಿತವಾಗಿಯೂ, ಅನುಕೂಲಕರವಾಗಿಯೂ ಇದೆ ಎಂದುಖಚಿತಪಡಿಸಿಕೊಳ್ಳುವ ನೀತಿಗಳನ್ನು ನಾವು ಅನುಷ್ಠಾನಕ್ಕೆ ತರಬೇಕು, ಇದಕ್ಕೆ ಪೂರಕವಾದ ಕಾರ್ಯಕ್ರಮಗಳಲ್ಲಿ ನಾವು ಹೂಡಿಕೆ ಮಾಡಬೇಕಾಗುತ್ತದೆ.

ಲೇಖನವನ್ನು ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ ಡಾ. ಗಿರಿಧರ ಬಾಬು ಮತ್ತು ಪ್ರವೀಣ್‌ ರಾವ್‌ ಅವರಿಗೆ ಧನ್ಯವಾದಗಳು. ಲೇಖನವು COINCIDE ಎಂಬ ಯೋಜನೆಯಲ್ಲಿ ನಡೆಯುತ್ತಿರುವ ಸಂಶೋಧನೆಯನ್ನು ಆಧರಿಸಿದೆ. ಈ ಯೋಜನೆ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ವೆಲ್‌ಕಮ್‌ ಟ್ರಸ್ಟ್‌ ಇಂಡಿಯಾ ಆಲೈಯನ್ಸ್‌ ಟೀಮ್‌ ಸೈನ್ಸ್‌ ಅನುದಾನದಿ೦ದ ಬೆ೦ಬಲಿಸಲಾಗಿದೆ.

Thank you to Rajashree Hosamani (Intern) at IPH Bengaluru for help with formatting this article for online sharing.


Comments

Leave a Reply

This site uses Akismet to reduce spam. Learn how your comment data is processed.