I am not your data | ನಾನು ನಿಮ್ಮ ಅಂಕಿ ಅಂಶವಲ್ಲ | Abhay Xaxa/ಅಭಯ್ ಖಾಖಾ

Sociologist and activist Abhay Xaxa has written this poem that I found deeply illuminating for many privileged folks like myself who work with Adivasi communities. Since the poem in English is not accessible to many of my Kannada-speaking colleagues & collaborators, with help from Latha Chilgod, we produced a crude Kannada translation of the poem. A dream to set it to tune in Kannada one day, perhaps with help from some of the amazing Adivasi musicians here in Chamarajanagar…one day….meanwhile, below is our Kannada translation and further down is the original in English that I believe was first published in Roundtable India.

ನಾನು ನಿಮ್ಮ ಅಂಕಿ ಅಂಶವಲ್ಲ - ಅಭಯ್ ಖಾಖಾ

ನಾನು ನಿಮ್ಮ ಅಂಕಿ ಅಂಶ ಅಲ್ಲ, ವೊಟುಗಳ ಬ್ಯಾಂಕೂ ಅಲ್ಲ,
ನಾನು ನಿಮ್ದ್ಯಾವುದೋ ಯೋಜನೆ ಅಲ್ಲ, ಅಪರೂಪದ ಮ್ಯೂಸಿಯಂ ಪೀಸಲ್ಲ,
ಮೋಕ್ಷ ಕೊಡಿಸ್ತೀನಿ ಅಂತ ಕಾಯುತ್ತಿರುವ ಆತ್ಮ ನಾನಲ್ಲ,
ನಿಮ್ಮ ಸಿದ್ಧಾಂತಗಳನ್ನು ಶೊಧಿಸುವ ಪ್ರಯೋಗಾಲಯವೂ ಅಲ್ಲ.

ನಾನು ನಿಮ್ಮ ಯಂತ್ರಕ್ಕೆ ಮೆವಲ್ಲ, ಅನಾವಶ್ಯಕ, ಅದೃಶ್ಯ ಕೆಲಸಗಾರನೂ ಅಲ್ಲ,
ದೆಹೆಲಿ-ಬೆಂಗಲೋರಿನಲ್ಲಿ ಆಚರಿಸುವ ಸಮಾವೆಶನೆಯ ಮನರಂಜನೆಯೂ ಅಲ್ಲ.
ನಿಮಗೆ ಬೆಕಾದ ಕಾರ್ಯಕ್ಷೇತ್ರವೊ, ಗುಂಪು, ಅಥವಾ ನಿಮ್ಮ ಇತಿಹಾಸ ನಾನಲ್ಲ,
ನಿಮಗೆ ಆಗಬೆಕಾದ ಸಹಾಯವೊ, ನಿಮ್ಮಲ್ಲಿರುವ ತಪ್ಪಿತಸ್ಥ ಭಾವನೆಗೆ ನೆರವು ಅಥವಾ ನಿಮ್ಮ ಅಂಗೀಕಾರದ ಚಿಹ್ನೆ ನಾನಲ್ಲ.

ನನ್ನ ನಿರಾಕಾರ, ತಿರಸ್ಕಾರ, ವಿರೊಧ
ನಿಮ್ಮ ತೀರ್ಪುಗಳಿಗೆ, ದಾಖಲೆಗಳಿಗೆ, ವ್ಯಾಖ್ಯಾನಗಳಿಗೆ
ನಿಮ್ಮ ಮಾದರಿಗಳಿಗೆ, ನಾಯಕರಿಗೆ, ಪ್ರೊತ್ಸಾಹಕರಿಗೆ;
ನನ್ನ ಅಸ್ತಿತ್ವ, ನನ್ನ ದೃಷ್ಟಿ, ನನ್ನ ಜಾಗವನ್ನು ನಿರಾಕರಿಸಿದ್ದಕ್ಕೆ. 

ನಿಮ್ಮ ಪದಗಳು, ನಕ್ಷೆಗಳು, ಅಂಕಿಅಂಶಗಳು, ಗುರುತುಗಳು
ದಿಗ್ಭ್ರಮಿಸಿ ಕೊಡುತ್ತವೆ ಪೀಠ ನಿಮಗೆ 
ನೊಡಲು ಕೀಳಾಗಿ ನನ್ನನ್ನು ಕೆಳಗೆ.

ನನ್ನ ಚಿತ್ರ ನಾನೆ ಬರೆಯುವೆನು, ನನ್ನ ಸ್ವಂತ ವ್ಯಾಕರಣ ರಚಿಸುವೆನು,
ಇದು ನನ್ನ ಹೊರಾಟ, ಅದಕ್ಕೆ ನನ್ನದೇ ಉಪಕರಣಗಳಿರಲಿ,
ನನಗಾಗಿ, ನನ್ನ ಜನರಿಗಾಗಿ, ನನ್ನ ಪ್ರಪಂಚಕ್ಕಾಗಿ ಮತ್ತು ಆದಿವಾಸಿಯಾದ ನನ್ನ ಅಸ್ತಿತ್ವಕ್ಕಾಗಿ.

For the original poem on Roundtable India, see here. See an article covering his untimely demise from The News Minute & for a lovely essay richly linked to many of his works, see this piece titled Remembering scholar and activist Abhay Xaxa, whose death is an irreparable loss to Adivasi movements from The Caravan.


Comments

One response to “I am not your data | ನಾನು ನಿಮ್ಮ ಅಂಕಿ ಅಂಶವಲ್ಲ | Abhay Xaxa/ಅಭಯ್ ಖಾಖಾ”

  1. Venkatesh Avatar
    Venkatesh

    ಜಟಿಲ ಜಗತ್ತಿಗೆ ಇದು ಒಂದು ತಕ್ಕ ತಿರುಗೇಟು

Leave a Reply

This site uses Akismet to reduce spam. Learn how your comment data is processed.